ಹೇಮಂತ್ ಎಂ.ರಾವ್ ಅವರು ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರರಾಗಿದ್ದು, ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರ ನಿರ್ದೇಶನದ ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬) ಯಶಸ್ಸಿನ ನಂತರ ಅವರು ಖ್ಯಾತಿಗೆ ಏರಿದರು. == ವೃತ್ತಿ == ರಾವ್ ೨೦೦೫ರಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ಸಂಕ್ಷಿಪ್ತ ಶಿಕ್ಷಣವನ್ನು ಪೂರೈಸಿದ ನಂತರ ಚಲನಚಿತ್ರಗಳಿಗೆ ನಡೆದರು. ೨೦೦೮ರ ಚಲನಚಿತ್ರ 'ಗುಲಾಬಿ ಟಾಕೀಸ್‌'ನಲ್ಲಿ ಗಿರೀಶ್ ಕಾಸರವಳ್ಳಿಯವರೊ೦ದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು, ನ೦ತರ ಜೇಕಬ್ ವರ್ಗೀಸ್ ಅವರೊಂದಿಗೆ ಸವಾರಿ (೨೦೦೯) ಮತ್ತು ಪೃಥ್ವಿ (೨೦೧೦) ಚಿತ್ರಗಳಲ್ಲಿ ಕೆಲಸ ಮಾಡಿದರು. ಮಾಹಿತಿ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಹೇಳಲಾದ ಲವ್ ಚುರುಮುರಿ -ಯುವ ಕೇಂದ್ರಿತ ರೋಮ್ಯಾಂಟಿಕ್ ಕಥೆಯೊಂದಿಗೆ ಅವರು ೨೦೧೩ರಲ್ಲಿ ನಿರ್ದೇಶನದ ಮೊದಲ ಹೆಜ್ಜೆ ತುಣಿದರು. ಆದರೆ, ಚಲನಚಿತ್ರವನ್ನು ಸ್ಥಗಿತಗೊಳಿಸಲಾಯಿತು. ಅವರು ೨೦೧೬ರಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ದೇಶನ ಮಾಡಿದರು. ಈ ಚಿತ್ರ ಕಾಣೆಯಾದ ತನ್ನ ೬೬ ವರ್ಷದ ತಂದೆಯನ್ನು ಹುಡುಕುವ ಮಗನ ಕಥೆಯನ್ನು ಹೇಳುತ್ತದೆ. ಇದರಲ್ಲಿ ಅನಂತ್ ನಾಗ್ ಮತ್ತು ರಕ್ಷಿತ್ ಶೆಟ್ಟಿ ಆಯಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಲಾಸ್ಟ್ & ಫೌಂಡ್ ಫಿಲ್ಮ್ಸ್ ಎಂಬ ಬ್ಯಾನರ್ ಅಡಿಯಲ್ಲಿ, ಅವರು ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಅನ್ನು ಸಹ-ನಿರ್ಮಿಸಿದರು. ಈ ಚಿತ್ರ ದಿ ಕ್ಯಾಂಪೇನ್ ನಿಂದ ಪ್ರೇರಿತವಾದ ರಾಜಕೀಯ ವಿಡಂಬನೆಯ ಹಾಸ್ಯ ಚಲನಚಿತ್ರವಾಗಿದೆ . ೨೦೧೮ರ ಹಿಂದಿ ಚಲನಚಿತ್ರ ಅಂಧಾಧುನ್‌ ಗೆ ಚಿತ್ರಕಥೆ ನೀಡಿದ ಕಾರಣಕ್ಕಾಗಿ ಇವರು ಇತರ ಬರಹಗಾರರೊಂದಿಗೆ ಜಂಟಿಯಾಗಿ ೨೦೧೯ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ಎರಡನೇ ನಿರ್ದೇಶನದ ಚಿತ್ರ ಕವಲುದಾರಿ, ನಟ ಪುನೀತ್ ರಾಜ್‌ಕುಮಾರ್ ಅವರ ಹೋಮ್ ಬ್ಯಾನರ್ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಮಾಡಿದ ಮೊದಲ ಚಿತ್ರ. == ಚಿತ್ರಕಥೆ == == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ೨೦೧೭: ಅತ್ಯುತ್ತಮ ಚಿತ್ರಕಥೆಗಾಗಿ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ - ಗೋಧಿ ಬಣ್ಣ ಸಾಧಾರಣ ಮೈಕಟ್ಟು ೨೦೧೭: ಗೊಲ್ಲಪುಡಿ ಶ್ರೀನಿವಾಸ್ ಪ್ರಶಸ್ತಿ - ಗೋಧಿ ೨೦೧೭: ಅತ್ಯುತ್ತಮ ಚಿತ್ರಕಥೆಗಾಗಿ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ - ಗೋಧಿ ಬಣ್ಣ ಸಾಧಾರಣ ಮೈಕಟ್ಟು ಬಣ್ಣ ಸಾಧಾರಣ ಮೈಕಟ್ಟು == ಉಲ್ಲೇಖಗಳು == == ಬಾಹ್ಯ ಲಿಂಕ್‌ಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಎಂ.ರಾವ್